/*------Layout (end)----------*/ -->

Header Ads

ksrtc job recruitment 2023 SDA fda peon posts

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘವು ಸಿಬ್ಬಂದಿ ಮೇಲ್ವಿಚಾರಕರು, ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆಯನ್ನು ಪ್ರಕಟಿಸಿದೆ. ಅರ್ಜಿದಾರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಮಾಹಿತಿಯು ಅವಶ್ಯಕವಾಗಿದೆ.






 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ಸ್ಟಾಫ್ ಸೂಪರ್‌ವೈಸರ್, ಅಕೌಂಟ್ಸ್ ಸೂಪರ್‌ವೈಸರ್, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಮತ್ತು ಕಚೇರಿ ಸಹಾಯಕ ಹುದ್ದೆಗಳಿಗೆ ಉದ್ಯೋಗ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದೆ. ಫೆಬ್ರವರಿ 7 ರೊಳಗೆ, ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಮುಂದಿನ ವಿಭಾಗವು ಪೋಸ್ಟ್‌ಗಳ ಕುರಿತು ಹೆಚ್ಚಿನ ವಿವರಗಳನ್ನು ಒಳಗೊಂಡಿದೆ.
 ಪೋಸ್ಟ್ ನಿಶ್ಚಿತಗಳು
 ಖಾತೆಗಳ ಮೇಲ್ವಿಚಾರಕ: 1 
ಸಿಬ್ಬಂದಿ ಮೇಲ್ವಿಚಾರಕ: 2
 ಪ್ರಥಮ ದರ್ಜೆ ಸಹಾಯಕರು: 7
  ದ್ವಿತೀಯ ದರ್ಜೆ ಸಹಾಯಕರು:18
  ಕಚೇರಿ ಸಹಾಯಕ ಸಿಬ್ಬಂದಿ :11




ಹುದ್ದೆವಾರು ವೇತನ ಶ್ರೇಣಿ ರೂ.ಗಳಲ್ಲಿ
ಸಿಬ್ಬಂದಿ ಮೇಲ್ವಿಚಾರಕರು: Rs.33450-62600.
ಲೆಕ್ಕಪತ್ರ ಮೇಲ್ವಿಚಾರಕ: Rs.33450-62600.
ಪ್ರಥಮ ದರ್ಜೆ ಸಹಾಯಕರು: Rs.27650 - 52650.
ದ್ವಿತೀಯ ದರ್ಜೆ ಸಹಾಯಕರು: Rs.21400-42000.
ಕಛೇರಿ ಸಹಾಯಕರು: Rs.18600-32,600.
ಸೂಚನೆ: ಮೇಲ್ಕಂಡ ವೇತನ ಜತೆಗೆ ಸಂಘದ ಆಡಳಿತ ಮಂಡಳಿಯು ಕಾಲಕಾಲಕ್ಕೆ ನಿಗಧಿಪಡಿಸುವ ತುಟ್ಟಿಭತ್ಯೆ ಮತ್ತು ಮನೆ ಬಾಡಿಗೆ ಭತ್ಯೆಯನ್ನು ನೀಡಲಾಗುವುದು.

ಅರ್ಹತೆಗಳು
ಸಿಬ್ಬಂದಿ ಮೇಲ್ವಿಚಾರಕ / ಲೆಕ್ಕಪತ್ರ ಮೇಲ್ವಿಚಾರಕ / ಪ್ರಥಮ ದರ್ಜೆ ಸಹಾಯಕರು : ಪದವಿ ಪಾಸ್ ಮಾಡಿರಬೇಕು. ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಶನ್ ಜ್ಞಾನದ ಜತೆಗೆ ಟ್ಯಾಲಿ ಕೋರ್ಸ್‌ನ ತೇರ್ಗಡೆ ಪತ್ರವನ್ನು ಹೊಂದಿರಬೇಕು. ಕನ್ನಡ ಓದಲು, ಬರೆಯಲು ಬರತಕ್ಕದ್ದು.
ದ್ವಿತೀಯ ದರ್ಜೆ ಸಹಾಯಕರು: ದ್ವಿತೀಯ ಪಿಯುಸಿ ಪಾಸ್ ಮಾಡಿರಬೇಕು. ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಶನ್ ಜ್ಞಾನದ ಜತೆಗೆ ಟ್ಯಾಲಿ ಕೋರ್ಸ್‌ನ ತೇರ್ಗಡೆ ಪತ್ರವನ್ನು ಹೊಂದಿರಬೇಕು. ಕನ್ನಡ ಓದಲು, ಬರೆಯಲು ಬರತಕ್ಕದ್ದು.
ಕಛೇರಿ ಸಹಾಯಕರು : ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿರಬೇಕು. ಕನ್ನಡ ಭಾಷೆಯನ್ನು ಒಂದು ವಿಷಯವನ್ನಾಗಿ ಓದಿರತಕ್ಕದ್ದು.

ವಯಸ್ಸಿನ ಅರ್ಹತೆ
- ಯಾವುದೇ ಅರ್ಜಿ ಹಾಕಲು ಕನಿಷ್ಠ 18 ವರ್ಷ ಆಗಿರಬೇಕು.
- ಸಾಮಾನ್ಯ ಕೆಟಗರಿ ಅಭ್ಯರ್ಥಿ ಆಗಿದ್ದಲ್ಲಿ ಗರಿಷ್ಠ 35 ವರ್ಷ ಮೀರಿರಬಾರದು.
- ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 38 ವರ್ಷ ಮೀರಿರಬಾರದು.
- ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಗೆ ಸೇರಿದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು.
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ.

ಅರ್ಹ ಅಭ್ಯರ್ಥಿಗಳು ಸಂಘವು ನಿಗಧಿಪಡಿಸಿರುವ ಅರ್ಜಿ ನಮೂನೆಯನ್ನು ಸಂಘದ ಪ್ರಧಾನ ಕಛೇರಿ, ಶಾಂತಿನಗರ, ಕೆ.ಹೆಚ್‌.ರಸ್ತೆ, ಬೆಂಗಳೂರು-27 ಇಲ್ಲಿ ಕಛೇರಿ ವೇಳೆಯಲ್ಲಿ ಪಡೆಯಬಹುದು.




ಅರ್ಜಿ ಶುಲ್ಕ ರೂ.500 ನಗದು ಪಾವತಿಸಿ ಪಡೆದುಕೊಳ್ಳಬುದು. ನಂತರ ಭರ್ತಿ ಮಾಡಿದ ಅರ್ಜಿಯೊಂದಿಗೆ ಶೈಕ್ಷಣಿಕ ದಾಖಲೆಗಳನ್ನು ಲಗತ್ತಿಸಿ ದಿನಾಂಕ 07-02-2023 ರೊಳಗೆ ಇದೇ ಕಛೇರಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸಲ್ಲಿಸಿ, ಸ್ವೀಕೃತಿ ಪಡೆಯತಕ್ಕದ್ದು.
ವಿದ್ಯಾರ್ಹತೆ ಮತ್ತು ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಪಡೆದಿರತಕ್ಕದ್ದು.

Notification link 👇🏻👇🏻👇🏻


ಸಂಪರ್ಕಕ್ಕಾಗಿ



ಕೆ.ಎಸ್‌.ಆರ್‌.ಟಿ.ಸಿ ಕೇಂದ್ರ ಕಚೇರಿ, ಕೆ.ಹೆಚ್.ರಸ್ತೆ, ಬೆಂಗಳೂರು, ಪಿನ್ - 560027.
ದೂರವಾಣಿ ಸಂಖ್ಯೆ : 080-22223421
ಇ-ಮೇಲ್ ವಿಳಾಸ : Ksrtceccs@yahoo.co.in

No comments

Powered by Blogger.